Featured

ಮೌನವಾದ ಮುಗ್ಧ ಪ್ರೀತಿ

ಮೊದ ಮೊದಲ ತುಂಟ ನಗೆ

ನಿನ್ನ ಕಂಡಾಗ ಮುಗುಳ್ನಗೆ

ಇದುವೇ ಯೌವ್ವನದ ಸೊಬಗೆ ?

ಸದಾಕಾಲ ನಿನ್ನ ನೆನೆಯುತ..

ಕುಂಚ ಹಿಡಿದ ಕಂಗಳು, ಸಂಭ್ರಮಿಸಿತು ಕನಸುಗಳ ಚಿತ್ತಾರ ಬಿಡಿಸುತ.

ನೀನೆ ಆತ್ಮ ಸಂಗಾತನೆಂದು ಮನಸು ಹೇಳುತ..

ಹೃದಯ ಮಿಡಿಯಿತು   ಪ್ರೀತಿಯ  ಲಾಲಿ ಹಾಡುತ.

ನಾ ಹಾಡದ ಪಲ್ಲವಿಗೆ ಕಣ್ಮರೆಯಾದೆ ನೀ ಮಾಯಾಜಿಂಕೆಯಂತೆ..

ಕನಸುಗಳು ಕನಸಾಗೇ ಉಳಿದವು…. 

 ಮಾಸಿದ ಕನಸಿಗೆ ಹೊಸದೊಂದು ಪ್ರೀತಿಯ ತುಡಿತ..

ಹೃದಯಗಳ ಮಿಲನದ ಸ್ವರ ಸಂಗೀತ..

ಮರುಭೂಮಿಯಾದ ಮನಸಿಗೆ ಪ್ರೀತಿಯ ಅಲೆಗಳ ಚುಂಬನ..

ಕ್ಷಣಕಾಲ ಮೈ ಮರೆಸಿ ಹಿಂದೆ ಸರಿಯಿತು ಕಡಲ ಅಲೆಯಂತಲೇ..

ನಾ ಬೇಡಿದ ಮುಗ್ದ ಪ್ರೀತಿಗೆ ಹಾರಿ ಹೋಯಿತು ಪಾರಿಜಾತ.

ಕನಸುಗಳು ನನಸಾಗಿ, ನೆನಪಾಗಿ ಕಾಡಿದವು.

 

 

 

 

ಪಾರಿಜಾತವನು ಪ್ರೇಮದ ಪಂಜರದಿ ಸೇರಿಸಲು ಸೋತೆ…

ಮಾಯಾ ಜಿಂಕೆಯನು ಮತ್ತೊಮ್ಮೆ,ಮಗದೊಮ್ಮೆ ಕಂಡರೂ ಹಿಡಿಯಲು ಸೋತೆ…

ಕೊನೆಗೆ ಸಿಕ್ಕಿದ್ದು ನೀರವ ಮನಸ್ಸಿನ ಮೌನಗೀತೆ………

Advertisements
Featured

ಸುಂದರ ಸಂಜೆ

ಪೆದ್ದು ಮನಸ್ಸಿನ ಭಾವುಕ ಕನವರಿಕೆ..

ಮುಂಜಾನೆಯಲ್ಲು, ಮುಸ್ಸಂಜೆಯಲ್ಲು ನೆನಪುಗಳ ಕಲರವ..

ಸವಿನೆನಪುಗಳ ಆಗರ ಆ ಸುಂದರ ಸಂಜೆ.

ಸ್ವಾತಿ ಮಳೆಯ ಚುಂಬನವಾದ ಆ ಸವಿನವ ಭಾವ..

ಬಿಗಿದಪ್ಪಿ  ಅತ್ತಾಗ ಕಣ್ಣೀರು ಸೇರಿತು ಸಮುದ್ರವ..ಸ್ವಾತಿ ಮುತ್ತಾಗಿ.

ಈ ಪುಟ್ಟ ಹೃದಯದಲಿ ಸಾವಿರಾರು ನೆನಪುಗಳ ಬತ್ತಳಿಕೆ..

ಕೊಂಡೊಯ್ಯಬಾರದೇ ಕೆಲವನ್ನು ನಿನ್ನ ಬಳಿ,

ನನ್ನ ನೆನಪಿನ ಜೋಳಿಗೆಯ ಭಾರ ಇಳಿಸಲು.

Featured

ಮಿಡಿದ ಹೃದಯ

ಭಾವನ ಲೋಕದಲ್ಲಿ ವಿಹರಿಸುತ್ತಿರುವೆ..
ಒಮ್ಮೆ ತಿರುಗಿ ನೋಡು ನಿನಗಾಗಿ ಕಾದಿರುವೆ..

ccaf7-download

ಮುಂಜಾನೆಯಲ್ಲು, ಮುಸ್ಸಂಜೆಯಲ್ಲು ನೀ ನನ್ನ ಉಸಿರಾಗಿರುವೆ..
ಮೌನ ಕಣಿವೆಯಲಿ ಭಾವನೆಗಳು ಗುಪ್ತಗಾಮಿನಿಯಾಗಿ ಹರಿಯುತಲಿವೆ..
ನಿನ್ನ ಮಾತುಗಳು ಭಾವ ತಂತುಗಳನ್ನು ಮುಟ್ಟಿ ತರಂಗ ಎಬ್ಬಿಸಿವೆ..

ಮುಸ್ಸಂಜೆಯ ಮೆಲುಗಾಳಿಯಲ್ಲಿ ನಿನ್ನ ನೆನಪುಗಳೇ ಆವರಿಸಿವೆ..
ನಿನ್ನ ಮಾತುಗಳಿಗೆ ನಾನೇ ಭಾವವಾಗುತ್ತ,
ನನ್ನ ಮುಗ್ಧ ಪ್ರೀತಿಯ ಪ್ರಪಂಚ ವಿಸ್ತರಿಸಿದೆ.d8b1c-images3

ಭಾವನೆಗಳ ಮಿಲನ ಹೃದಯಕ್ಕೆ ನಿಷ್ಕಳಂಕ
ಸ್ನೇಹದ ಗರ್ಭದಾನ ಮಾಡಿ ಮೌನವಾಗಿ ಹಿಂದೆ ಸರಿದಿರುವೆ.
ಪ್ರೀತಿಯೆಂಬ ಶಿಶುವು ಜನಿಸಿ, ನೀ ನೀಡುವ ಕೈ ತುತ್ತಿಗೆ ಕಾಯುತ್ತಿರುವೆ………..

Featured

ವಿದಾಯ

ಮುಸ್ಸಂಜೆಯಲ್ಲಿ ಕವಲುದಾರಿಯೊಂದು
ವಿದಾಯಕ್ಕೆ ಸಾಕ್ಷಿಯಾಗಿತ್ತು.
ಅವನು ಸ್ಥಬ್ಧವಾಗಿದ್ದನು;
ನಾನು ನಡೆಯುತ್ತಲೇ ಇದ್ದೆ;
ಮೌನದ ತುದಿಯಲ್ಲಿ ಕಣ್ಣೀರು ಜಾರುತಿತ್ತು..
ಕೊನೆಗೂ ನನ್ನ ಪ್ರೀತಿಯ ಪಂಜರದಿಂದ ಅವನು ಹಾರಿ ಹೋದನು……
Featured

ಪ್ರೀತಿಯ ನೆನಪು

ಸೂರ್ಯಾಸ್ತದ ಗಳಿಗೆಯಲಿ ಆ ಸಂಧ್ಯಾ ತೀರದಲ್ಲಿ..!!
5178
ನಿನ್ನ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದ ನೆನಪು..
ಸಿಹಿ ಕಹಿಗಳನು ನಿನ್ನೊಡನೆ ಹಂಚಿಕೊಂಡ ನೆನಪು..
ನಿಶ್ಚಿಂತೆಯಿಂದ ನಿನ್ನ ಮಡಿಲಿನಲ್ಲಿ ಮಲಗಿದ ನೆನಪು..
ನನ್ನ ಸಾಂತ್ವಾನಿಸಲು ನೀ ತಲೆ ನೇವರಿಸಿದ ನೆನಪು..
ಪ್ರೀತಿಯಿಂದ ತಬ್ಬಿದಾಗ ನಿನ್ನ ಹೃದಯ ಮಿಡಿದ ಸ್ವರಗಳ ನೆನಪು..
ಹಸಿವಿಲ್ಲವೆಂದಾಗ ನೀ ನೀಡಿದ ಕೈ ತುತ್ತುಗಳ ನೆನಪು..
ವಿಶಾಲ ಸಮುದ್ರದ ಮಧ್ಯೆ ನಿಂತು ತೇಲಿದಂತೆ ಭಾಸವಾದ ನೆನಪು..
ಮಳೆಯಲ್ಲಿ ಕೊಡೆ ಹಿಡಿದು ಪಿಸುಗುಟ್ಟಿದ ನೆನಪು..
ನಾ ಮುದ್ದು-ಪೆದ್ದುವಾಗಿ ಆಡುವಾಗ ನೀ ಫೋಟೊ ಕ್ಲಿಕ್ಕಿಸಿದ ನೆನಪು..
ನಿನ್ನ ನಗೆ ಚಟಾಕಿಯಿಂದ ಹೊಟ್ಟೆ ಉಣ್ಣಾಗುವಂತೆ ನಗಿಸಿದ ನೆನಪು..
ಜೊತೆ ಜೊತೆಯಾಗಿ ಕೂಡಿ ನಲಿದ ನೆನಪು..
ಸೋತಾಗ ಬೆನ್ ತಟ್ಟಿ ಹುರಿದುಂಬಿಸಿದ ನೆನಪು..
ಬಿಸಿಲಿದ್ದಾಗ ನೀ ನೆರಳಾಗಿ ನಿಂತ ನೆನಪು..
ನನ್ನ ಮೌನಕ್ಕೆ ರಾಗವಾಗಿ ಮಾತು ಕಲಿಸಿದ ನೆನಪು..
ದೇವರ ಕೃಪೆಗೆ, ಜೊತೆಯಾಗಿ ಕೈ ಮುಗಿದು ನಿಂತ ನೆನಪು..
ನನ್ನ ಪ್ರೀತಿಗೆ ಮಮತೆಯ ಲಾಲಿ ಹಾಡಿದ ನೆನಪು..

ನೆನಪುಗಳು ಮೂಡಿದ ದಾರಿಯಲ್ಲೇ,
ನಿ ನನ್ನ  ಕೈ ಬಿಟ್ಟು ಹೋದ ನೆನಪು..
ಈ ನನ್ನ ಪ್ರೀತಿಗೆ ನೀ ಕೊಟ್ಟ ಉಡುಗೊರೆ “ಪ್ರೀತಿಯ ನೆನಪು” ಇನಿಯ…!!

ನೆನಪೆಂಬ ಆತ್ಮ

ಸೋಲುತ್ತಿರುವೆ ಸದಾ ನೀ ನೀಡಿದ ನೆನಪುಗಳಿಗೆ
ನೆನಪುಗಳನ್ನು ಒಯ್ದುಬಿಡು ಪ್ರೀತಿಯೆಂಬ ಸಮಾಧಿಗೆ
ಎಂದಿಗೂ ಕಾಡದಿರು ನೆನಪೆಂಬ ಆತ್ಮವಾಗಿ
ನಿದ್ರಿಸಲು ಭಯವಾಗುವುದು ನಿನ್ನ ನೆನಪುಗಳು ಕರಾಳವಾಗಿ
ಬೇಡದ ಒಲವು ಕರಗಿಬಿಡಲಿ ಮಣ್ಣಲ್ಲಿ ಮಣ್ಣಾಗಿSad2

ಸ್ನೇಹ ಸಂಬಂಧ

ಮೌನದಿ ಮೊಗ್ಗಾಗಿದ್ದ ಮನಸ್ಸು ಅಂದು..
ಅರಳಿತು ಚಟಪಟ ಮಾತುಗಳು ಬಂದು.
ಮರೆಯಲಾಗದ ಕ್ಷಣಗಳು ಪ್ರತಿಯೊಂದು.. 
ಸ್ನೇಹ ಸಂಬಂಧಗಳ ಸಂಭ್ರಮವೇ ಎಂದೆಂದೂ.

Image may contain: one or more people, sky, cloud, ocean, outdoor, water and nature

ಎಲ್ಲರು ಜೊತೆಯಾಗಿ ಕಂಡ ಕನಸೊಂದು ,
ಮರೆಯದೆ ಮರಳುತ್ತಿದೆ ಮನಸಿನಲ್ಲಿ ಮಿಂದು .
ಅಜರಾಮರವಾಗಲಿ ಎಂದು ಬಯಸಿದ ಸ್ನೇಹವೊಂದು, 
ಅಗಲಿ ಹೋಯಿತೇ ಅಮರವಾಗದೆ ಭಾವನೆಗಳನ್ನು ಕೊಂದು.
ಅರಳಿದ್ದ ಮನಸ್ಸು ಬಾಡಿ ಹೋಗಿ ಮೌನವಾಗಿದೆ ಇಂದು.

ಬಚ್ಚಿಟ್ಟ ಭಾವನೆ

ಬಚ್ಚಿಟ್ಟ ಭಾವನೆಗಳನ್ನು ಬಣ್ಣಿಸಲು ಭಯವಾಗಿದೆ..
ಕೂಡಿಟ್ಟ ಕನಸುಗಳು ಕರಗಿ ಹೋದ ನೆನಪಾಗಿದೆ..
ಮೌನದ ಮನಸ್ಸಿನಲಿ ಗುಪ್ತ ಭಾವನೆಗಳ ಹಬ್ಬರದ ಅಲೆಗಳ ಕಂಡು ಭಯವಾಗಿದೆ..
ಭೂತಕಾಲದ ನೆನಪುಗಳು ಭೂತವಾಗಿ ಸುಳಿದಂತೆ ಭಾಸವಾಗಿದೆ..
Image may contain: one or more people, sky, outdoor and nature
ಈಗೇಕೆ ಎಂದು ಪ್ರಶ್ನಿಸುತ್ತ ಮನಸ್ಸು ನಲುಗಿದೆ..
ಎಲ್ಲವುದರಿಂದ ದೂರಾಗಿ ಏಕಾಂಗಿಯಾಗಿದೆ…
ನೈಜತೆಯ ಭಾವನೆಗಳು ಕೆಟ್ಟ ಕನಸಂತೆ ಮರೆಯಾಗಿದೆ..
ಭರವಸೆಯ ಬೆಳಕನ್ನಿಡಿದು ಹೊಸ ಜೀವನದ ಪಯಣವು ಸಾಗಿದೆ.
#feelings #memories #baddream #alone  

ಶುಭಾಶಯ

ಮುಕ್ತ ಮನಸ್ಸಿನ ಮುದ್ದು ಗೆಳೆಯ.. 

ನಿನ್ನ ಓಡನಾಟವೇ ಒಂದು ಸವಿನಯ ಪಯಣ.

ಭಾವನೆಗಳಿಗೆ ಪ್ರತಿಕ್ರಿಯಿಸುವ ಮುತ್ತಿನಂತ ಸ್ವಭಾವ..

ಕಷ್ಟಗಳಿಗೆ ಸ್ಪಂದಿಸುವ ಸಹೃದಯದ ಒಡನಾಡಿ..

Image may contain: one or more people

ಸ್ನೇಹದ ಕಡಲು ಮೂಡಲು ಕಾರಣವು ಆ ನಿನ್ನ ಸವಿನುಡಿ. 

ನಿನ್ನ ಜೀವನದ ಉನ್ನತಿಗೆ ಬರೆ ನೀ ಮುನ್ನುಡಿ..

ಜಾತಿ ಭಾಷೆಗೂ ಮೀರಿದ ಭಾವನೆಗಳ ಬಂಧವೇ ಈ ಸ್ನೇಹ 

ನೀ ನೀಡಿದ ಸ್ನೇಹಕ್ಕೆ ನಾನೆಂದೂ ಚಿರರುಣಿ..

ಕೋರುವೆ ಶುಭಾಶಯ ನಿನ್ನ ಜನ್ಮ ದಿನದಿ, 

ಕನಸುಗಳು ನನಸಾಗಿ ಸುಗಮವಾಗಿ ಸಾಗಲಿ ನಿನ್ನ ಜೀವನದ ಪಯಣ..

 

#Friend #birthday wish  

ಮನವಿಯ ಕವನ

ಮೌನದಿ ಮೂಡಿದ ಮನವಿಯ ಕವನವಿದು..

ಆಸೆಗಳು ನಿರಾಸೆಯಾಗಿದ ದಿನದಂದು.

ಕೈ ಜಾರಿ ಹೋದ ಕನಸುಗಳ ವಿಹಾರವಿದು.

Image may contain: 1 person, smiling, outdoor and water

ಹೊಸ ದಾರಿಯ ಹುಡುಕುತ ಸಾಗುತ್ತಿಹುದು..

ಹೊಸ ಕನಸುಗಳನ್ನು ಕಾಣುತ್ತಿಹುದು…

ನಿರಾಸೆಯು ಮೂಡದಿರಲಿ ಓ ದೇವರೇ,ನನ್ನ ಮನವಿ ಇದು.

ಧೈರ್ಯದಿಂದ ಮುನ್ನಡೆದರೆ ಭರವಸೆಯ ಬೆಳಕಿಹುದು..

ಅಂತೆ ಕಂತೆಗಳ ಮಾತುಗಳಿಗೆ ಪ್ರತಿಯುತ್ತರವಿರುವುದು..

ನಾವಿಕನು ನೀನೇ, ನಿನ್ನ ಜೀವನದ ಪಯಣವಿದು..

ಸಾಗುತಿರು ಮುಂದೆ, ಪ್ರಯತ್ನಗಳ ಹುಟ್ಟನ್ನು ಹಾಕುತ್ತಾ..

ಕಾಣದ ಕಡಲಿಗೆ ಸೇರುವೆನೆಂಬ ನಂಬಿಕೆಯಿಂದ.

 

#dreams #hope #life _journey #prayer

ಪ್ರೀತಿಯ ಕರೆ

Image may contain: one or more people

ಏನೆಂದು ಉತ್ತರಿಸಲಿ ನಿನ್ನ ಈ ಮುಗ್ಧ ಪ್ರೀತಿಗೆ..

ಬೇಕು ಬೇಡಗಳ ನಡುವೆ ಚಡಪಡಿಸುತಿದೆ ನಾಲಿಗೆ..

ಕಾರಣವು ಸಿಗುತ್ತಿಲ್ಲ ಉತ್ತರಿಸಿಲು ಮಿಡುಕಾಡುತ್ತಿರುವ ಈ ಕಣ್ಣಿಗೆ!!

ಇಷ್ಟ ಕಷ್ಟಗಳ ನಡುವೆ ಕೊರಗುತ್ತಿರುವ ಮನಸ್ಸಿಗೆ,

ನಿನ್ನ ಪ್ರೀತಿಯ ಲಾಲಿ ಕೇಳಿ ಅರಳಬಹುದೇನೊ ಹೊಸ ಕಿರುನಗೆ..

ಏನೂ ತಿಳಿಯದೆ ಸ್ತಬ್ಧವಾಗಿದೆ ಹೃದಯ ನಿನ್ನ ಪ್ರೀತಿಯ ಕರೆಗೆ…

 

ಏನೆಂದು ಉತ್ತರಿಸಲಿ ನಿನ್ನ ಈ ಮುಗ್ಧ ಪ್ರೀತಿಗೆ..
ಬೇಕು ಬೇಡಗಳ ನಡುವೆ ಚಡಪಡಿಸುತಿದೆ ನಾಲಿಗೆ..
ಕಾರಣವು ಸಿಗುತ್ತಿಲ್ಲ ಉತ್ತರಿಸಿಲು ಮಿಡುಕಾಡುತ್ತಿರುವ ಈ ಕಣ್ಣಿಗೆ!!

depositphotos_26098237-stock-video-sad-woman-thinking
ಇಷ್ಟ ಕಷ್ಟಗಳ ನಡುವೆ ಕೊರಗುತ್ತಿರುವ ಮನಸ್ಸಿಗೆ,
ನಿನ್ನ ಪ್ರೀತಿಯ ಲಾಲಿ ಕೇಳಿ ಅರಳಬಹುದೇನೊ ಹೊಸ ಕಿರುನಗೆ..
ಏನೂ ತಿಳಿಯದೆ ಸ್ತಬ್ಧವಾಗಿದೆ ಹೃದಯ ನಿನ್ನ ಪ್ರೀತಿಯ ಕರೆಗೆ…

ಕಾದಿರುವ ಹೃದಯ

 

ಹೇಗಿರುವೆ ನನ್ನ ಮರೆಯದೆ ಮರೆತಂತೆ ಓ ಗೆಳೆಯ
ಕಲಿಸು ಒಮ್ಮೆ ನನಗೂ ನಿನ್ನ ಆ ಮೌನ ಪ್ರೀತಿಯ
ನಿನೇಕೆ ಆಲಿಸುತ್ತಿಲ್ಲ ಈ ಮನದ ಹೃದಯ ಗೀತೆಯ
ಒಮ್ಮೆ ಕೇಳಿ ನೋಡು, ಮತ್ತೊಮ್ಮೆ ಮಿಡಿಯಬಹುದು ನಿನ್ನ ಹೃದಯ..ಸಂಧ್ಯಾತೀರದಲಿ ಮೂಡಿದ ಆ ನೆನಪುಗಳ ಅಲೆಗಳು  ಅವಿಸ್ಮರಣೀಯ
ಹಿಂದುರುಗಿ ಒಮ್ಮೆ ನೋಡು ನೀ ಮರೆತ ಈ ಸಂಗಾತಿಯ
ನಿನ್ನ ಮುಂಗುರುಳ ನಗುವಿಗಾಗಿ ಕಾದಿರುವುದು ಈ ಹೃದಯ....


 

ನಿರೀಕ್ಷೆ

ದುಃಖದಲ್ಲು ಖುಷಿಯ ಕಂಡ ಆ ಗಳಿಗೆ

ಕಾರಣವು ಆ ನಿನ್ನ ಮುಗುಳ್ನಗೆ….

ಇಂದೇಕೆ ಖುಷಿಯಲ್ಲೂ ದುಕ್ಕಿಸುತಿದೆ ಮನವು

ಕಾರಣವು ನೀ ಇಲ್ಲದ ಆ ನೋವು ….

ಕನಸುಗಳು ಗರಿಬಿಚ್ಚಿ ನಲಿದಾಡಿದ ಆ ಖುಷಿ,

ಇಂದು ಮೌನದಿ ಕುಳಿತಿರುವವು ನಿನ್ನ ಬರುವಿಕೆಯ ನಿರೀಕ್ಷಿಸಿ ….

ಮತೊಮ್ಮೆ ಬಯಸಲೇ ನೀ ಕೊಟ್ಟ ಆ ಸಲಿಗೆ ??

ಮಗದೊಮ್ಮೆ ಬರಬಹುದೇ ಆ ಗಳಿಗೆ ??

ತಪ್ಪದೆ ಉತ್ತರಿಸು ಈ ನನ್ನ ಕರೆಗೆ..

ಕಾಯುತ್ತಿರುವೆ ನೀ ಬರಲು ನನ್ನ ಬಳಿಗೆ..

ಬಂದುಬಿಡು ಸತಾಯಿಸದೆ ನಾ ಮರೆಯಾಗುವದೊರಳಗೆ…

ನವನವೀನ ಭಾವ

ನಾ ಕಂಡ ಕನಸಿನಲಿ  ನಿನದೇ ಕನವರಿಕೆ
ಬೇಡವೆಂದರು ಬೆಂಬಿಡದೆ ಸುಲಿಯುವ ಮರೀಚಿಕೆ
ಆ ಮಧುರ ಅನುಭವಕೆ ಹೆಸರಿಡಲು ಅಂಜಿಕೆ
ನವನವೀನ ಭಾವದೊಂದಿಗೆ ನಿನ್ನ ಸೇರುವ ಬಯಕೆ
ನನ್ನೊಲುಮೆಯ ಉಡುಗೊರೆಯಾಗಿ ನೀ ಬರಬಾರದೇ ಹೊಸವರ್ಷಕೆ …

shutterstock_131484164