ಕೋಪದ ಬಲೆ

ಅಮ್ಮನ ಪ್ರೀತಿಯ ಮಗಳು, ಅಪ್ಪನ ಅಚ್ಚು ಮೆಚ್ಚಿನ ಸುಕುಮಾರಿ. ಹಳ್ಳಿಯ ಜನರಿಗೆಲ್ಲ ಮಾದರಿ ಹೆಣ್ಣು ಮಗಳು. ಅವಳ ಆ ನಯವಾದ ಗುಣ, ಮುಗ್ದತೆಯ ಸ್ವಭಾವ ಎಲ್ಲರ ಪ್ರೀತಿಗೆ ಕಾರಣವಾಗಿತ್ತು. ಎಲ್ಲೋ ಇರುವ ದೂರದ ಹೊಲಕ್ಕೆ ಕಾಲ್ನಡಿಗೆಯಲ್ಲೇ ಊಟದ ಬುತ್ತಿ ಹೊತ್ತು ಮನೆಯವರ ಉಪಚಾರವೇ ತನ್ನ ಕಾಯಕ ಎಂಬಂತೆ ಭಾವಿಸಿ ಬದುಕುತಿದ್ದ ಜೀವವದು. ಮನೆಯವರಿಗೆಲ್ಲ ಮುದ್ದು ಮನೆಮಗಳಾದರು ತನ್ನ ಅಣ್ಣನೊಂದಿಗೆ ಮಾತ್ರ ಶತ್ರುವಿನಂತ ಸಂಬಂಧ. ತನ್ನ ಹತ್ತಿರದ ಸಂಬಂಧಿಕರ ಮಗನನ್ನು ಪ್ರೀತಿಸುತಿದ್ದ ಕಾರಣ, ಅಣ್ಣನಿಗೆ ಅವಳ ಮೇಲೆ ಕೆಂಡದಂತ ಕೋಪ.

          ಕೆಲವು ವರ್ಷಗಳ ನಂತರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಸಿದ ಅಣ್ಣ, ಆಕೆಯ ಮುಖವನ್ನು ಕೂಡ ನೋಡಲು ಬಯಸದೇ ಮನೆ ಇಂದ ಹೊರಹಾಕಿದ ಪರಿಸ್ಥಿತಿ. ಮದುವೆಗೆ ಯಾವ ಗಟ್ಟಿಮೇಳವು ಇಲ್ಲ, ಮಂತ್ರ ಪಠಣವೂ ಇಲ್ಲ. ನಾಲ್ವರ ಹಿರಿಯರ ಆಶೀರ್ವಾದದೊಂದಿಗೆ ದೇವರ ಸನ್ನಿದಿಯಲ್ಲಿ ಒಂದಾದ ಇಬ್ಬರು ತಮ್ಮ ಜೋಳಿಗೆಯಲ್ಲಿ ದುಃಖ ಸಂಕಟಗಳನ್ನೇ ಕೊಂಡೊಯ್ದು ಮುಂದೆ ಸಾಗಿದರು. ಇತ್ತ ಅಮ್ಮನ ಮನೆಯ ನೆರಳು ಇಲ್ಲದೆ ಅತ್ತ ಗಂಡನ ಮನೆಯವರ ಆಸರೆಯೂ ಸಿಗದೇ, ತನ್ನ ಪತಿಯ ಜೊತೆ ಊರನ್ನೇ ತೊರೆದು ಹೊರನಡೆದಳು, ತನ್ನ ನೋವೆಂಬ ಬುತ್ತಿಯನ್ನು ಕಟ್ಟಿ .

         ಮದುವೆಯಾದ ಕೆಲ ಸಮಯದ ನಂತರ ತವರು ಮನೆಯವರ ಕೋಪ ಕಡಿಮೆ ಆಗಿರಬಹುದು ಎಂದುಕೊಂಡು ಮನೆಗೆ ಬಂದ ಆಕೆಗೆ ಸಿಕ್ಕಿದ ಕೇವಲ ಅವಮಾನ. ಆಕೆಯನ್ನು ಬೀದಿಗೆ ತಳ್ಳಿ ತವರುಮನೆಯ ಬಾಗಿಲು ಶಾಶ್ವತವಾಗಿ ಮುಚ್ಚಿತ್ತು. ನಿಂತು ನೋಡುತಿದ್ದವರ ಭಾವ ಅಸಹಾಯಕತೆ ಇಂದ ತುಂಬಿತ್ತು. ಹುಟ್ಟಿದಾಗಿನಿಂದ ತವರು ಮನೆಯ ದೀಪವಾಗಿ, ಜೀತದಾಳಂತೆ ದುಡಿದು ಎಲ್ಲರ ಯೋಗ ಕ್ಷೇಮಕ್ಕೆ ಕಾರಣಳಾದ ಆಕೆಗೆ ಸಿಕ್ಕಿದು ಇಂತಹ ವಿಷಾದಕರ ಬಹುಮಾನ. ಅಕ್ಕ-ತಂಗಿ, ತಂದೆ-ತಾಯಿ ಎಲ್ಲ ಸಂಬಂಧಗಳನ್ನು ತೊರೆದು ಮಾನಸಿಕವಾಗಿ ನೊಂದಿದ್ದ ಜೀವಕ್ಕೆ ಆಸರೆಯಾಗಿ ನಿಂತಿದ್ದು ಆಕೆಯ ಪತಿ ಮಾತ್ರ .
ಮದುವೆ ಆದ ಎರಡು ವರ್ಷಗಳಿಗೆ ಆ ವಿಧಿಯ ಬಲೆಗೆ ಗುರಿಯಾಗಿದ್ದು ಮನಕಲಕುವ ದೃಶ್ಯ. ತನ್ನ ಜೀವನವನ್ನು ಪ್ರೀತಿಯೆಂಬ ಬಲೆ ಎಣೆದು ಕಟ್ಟಿಕೊಳ್ಳುವ ಆಸೆಯಿಂದ ಬದುಕುತಿದ್ದ ಆ ಸಮಯದಲ್ಲಿ ಯಮನ ಸ್ವರೂಪವಾಗಿ ಬಂದಿದ್ದು ಕ್ಯಾನ್ಸರ್ ಕಾಯಿಲೆ. ಕಾಯಿಲೆಯ ಕಾರಣ ತನ್ನ ಗಂಡನ ಮನೆಸೇರಿದ ಆಕೆಗೆ ಪ್ರೀತಿ ಇರಲಿ ಊಟ ಉಪಚಾರವು ಸಿಗಲಿಲ್ಲ. ಎದುರಲ್ಲೇ ಅಮ್ಮನ ಮನೆ ಇದ್ದರು ಆಕೆಯ ಸಂಕಟದ ಕೂಗು ಯಾರಿಗೂ ಕೇಳಲಿಲ್ಲ. ರೋಗಸ್ಥಳು ಎಂಬ ಕಾರಣಕ್ಕೆ ಮನೆ ಅಲ್ಲೂ ಇರಲು ಬಿಡದೇ ಊರಿಂದ ಹೊರಗಿರುವ ಮನೆಯೊಂದರಲ್ಲಿ ಬಂಧಿ ಆದಳು ಆಕೆ. ಪ್ರತಿದಿನವೂ ಜೀವದ ಜೊತೆ ಬಡಿದಾಡಿ ಬದುಕುತಿದ್ದ ಕಾಲಘಟ್ಟವದು. ಸಾಯುತಿದ್ದ ಆ ಜೀವ, ಪ್ರೀತಿ ಎಂಬ ಮಳೆ ಹನಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಯಾವ ದೇವಾನು ದೇವತೆಗಳಿಗೂ ಆ ಭಕ್ತೆಯ ಪ್ರಾರ್ಥನೆ ಕೇಳಿಸಲೇ ಇಲ್ಲ.
ಅಂದು ವಿಧಿಸೂಚಿತ ದಿನವಿರಬಹುದು. ತವರುಮನೆಯಲ್ಲಿ ಅಣ್ಣನ ಮದುವೆ ಸಂಭ್ರಮ. ಅತ್ತ ಅವಳ ಜೀವವು ಯಮನ ಜೊತೆ ಸಂಗ್ರಾಮ. ಎರಡು ಹೆಜ್ಜೆ ಇರುವ ಅಮ್ಮನ ಮನೆಗೂ ಕೂಡ ಹೆಜ್ಜೆ ಇಡಲಾರದೆ ಸಂಕಟದಲ್ಲಿ ನರಳಾಡುತಿತ್ತು ಜೀವ. ಮದುವೆ ದಿಬ್ಬಣ ಹೊರಡುವ ಮುನ್ನವೇ ಸೂತಕದ ಸುದ್ದಿ ಕೇಳಬಂತು. ಅದುವೇ ತಂಗಿಯ ದುರ್ಮರಣ. ತನ್ನ ಗಂಡ ಎಷ್ಟೇ ಪ್ರಯತ್ನ ಪಟ್ಟರು ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುದ್ದಿ ಕೇಳಿ ಮನೆಯೇ ಕಣ್ಣೀರಿನಲ್ಲಿ ಮಡುವುಗಟ್ಟಿತ್ತು. ಅಣ್ಣನ ಆಕ್ರಂಧನ ಮುಗಿಲು ಮುಟ್ಟಿತ್ತು. ಎಷ್ಟೇ ವಿರೋಧಿ ಆದರೂ ಸಹೋದರಿ ಎಂಬ ಪ್ರೀತಿ ಕಳೆದುಕೊಳ್ಳಲು ಸಾಧ್ಯವೇ. ಆದರೆ ಆ ಕೋಪವೆಂಬ ಜ್ವಾಲೆಯಿಂದ, ಸತ್ತ ನಂತರವೂ ಆಕೆಯ ಮುಖವನ್ನು ಮನೆಯವರು ಯಾರು ಕೂಡ ನೋಡಲಿಲ್ಲ. ಕೋಪದಿಂದ ಎಲ್ಲರು ಸಾಧಿಸಿದ್ದಾದರೂ ಏನು? ಎಲ್ಲರ ಮನಸ್ಸಿಗೆ ನೋವು ಮಾತ್ರ. ಆ ನೋವಿನಲ್ಲೇ ಮದುವೆಯ ದಿಬ್ಬಣ ಹೊರಟಿತ್ತು. ಅತ್ತ ಆಕೆಯ ಶವ ದಿಬ್ಬಣ. “ಎಂತವರಿಗೂ ಬರಬಾರದು ಇಂತಹ ಕರುಳ ಕುಡಿಯ ನೋವು “ ಎಂದು ಜನರ ಸಂತಾಪ .
ತಾಯಿಯ ವ್ಯಥೆ ಕೇಳುವರಾರು. ಮಗನ ಮದುವೆಯ ಸಂಭ್ರಮವಿಲ್ಲ. ಮಗಳ ಚಿತೆಯ ನೋಡುವ ಸ್ಥಿತಿಯು ಇಲ್ಲ. ಮಗಳು ಬಯಸಿದ್ದು ಕೇವಲ ಅಮ್ಮನ ಮನೆಯ ಪ್ರೀತಿ ಅಷ್ಟೇ. ಆದರೆ ಆ ಆತ್ಮ ತೃಪ್ತಿಯು ಇಲ್ಲದೇ ಲೋಕವನ್ನೇ ತ್ಯಜಿಸಿದಳು ಏಕಾಂಗಿಯಾಗಿ. ದ್ವೇಷದ ಬದಲು ಪ್ರೀತಿಯ ಬುತ್ತಿ ನೀಡಿದರೆ ಎಷ್ಟೋ ಜೀವಗಳು ನೆಮ್ಮದಿ ಇಂದ ಕೊನೆ
ಉಸಿರೆಳೆಯುತ್ತವೆ.

#StoryOfLoveLife #Love and Anger #sister #brother 

ಪ್ರೀತಿಯ ಗೆಳತಿ

ಮುದ್ದು ಮೊಗದ ತುಂಟ ಹುಡುಗಿ,
ಕಣ್ಣಲ್ಲೇ ಸೆಳೆಯುವ ಸುಂದರಾಂಗಿ.
ನಾಚಿಸುವಳು ನರ್ತಿಸುವ ನವಿಲಾಗಿ,
ಭಾವನೆಗಳನು ನುಡಿಸುವಳು ಹಾಡಾಗಿ.

ವಾರೆ ನೋಟದಲ್ಲೇ ಮೈಮರೆಸುವ ಬೆಡಗಿ,
ಹರಟೆ ಹೊಡೆಯುವಳು ಮುದ್ದು ಮುದ್ದಾಗಿ.
ನೋವು ನಲಿವಿಗೆ ಇರುವಳು ಜೊತೆಯಾಗಿ.
ಸಾಗಲಿ ಈ ಬಂಧನ ಪ್ರೀತಿಯ ಗೆಳತಿಯಾಗಿ.

ಕನಸಿನ ಲೋಕ

ಮುಸ್ಸಂಜೆ ವೇಳೇಲಿ,
ಸೊಗಸಾದ ತಿಳಿ ತಂಪಲ್ಲಿ,
ಮಳೆಹನಿಯಂತೆ ಚಟಪಟಿಸುತ್ತಿರುವೆ ನೀ ನನ್ನಲಿ..
ಮನವು ಮುಳುಗಿರುವುದು ನಿನ್ನದೇ ನೆನಪಲ್ಲಿ.

ನಿನ್ನ ಮುಂಗುರುಳ ಸ್ಪರ್ಶಕ್ಕೆ ಕಾದಿಹೆನು ನಾನಿಲ್ಲಿ,
ನಿನ್ನದೇ ಚಿತ್ತಾರ ಬಿಡಿಸುತ್ತಿಹೆನು ನನ್ನ ಕಂಗಳಲ್ಲಿ.
ಒಮ್ಮೆ ಹಾಜರಾಗು ನನ್ನ ಕನಸಿನ ಲೋಕದಲ್ಲಿ,
ಜೋಪಾನ ಮಾಡುವೆನು ಎಂದೆಂದು,ನನ್ನೆದೆಯ ಗೋಪುರದಲ್ಲಿ.

Image may contain: one or more people and people standing

ಚೋರ

ಸುಂದರ ಮೊಗದ ಸುರಸುಂದರ,
ಕಂಗಳ ಮಾತಲ್ಲೇ ಕೊಲ್ಲುವ ರಣಧೀರ.
ಕುಣಿದು ಕುಪ್ಪಳಿಸಿ ಮನಗೆಲ್ಲುವ ಚೋರ,
ಇವನ ಪ್ರಣಯಕ್ಕೆ ಮನಸೋತವರು ಅಪಾರ.

ಮಿಂಚಿನ ನೋಟದಲ್ಲೇ ಸೆಳೆಯುವ ಪೋರ,
ಸಾವಿರ ಗರ್ಲ್ ಫ್ರೆಂಡ್ಸ್ ಗಳ ಸರದಾರ.
ಇವನ ನಲ್ಮೆಯ ಸವಿನುಡಿಯೇ ಸೊಗಸಾದ ಚಿತ್ತಾರ,
ಮನಸ್ಸು ಮುದ್ದಾದ ಭಾವನೆಗಳ ಆಗರ,
ಹೃದಯ ಹೂವಿನ ಹಂದರ.

ಹೃದಯದ ಪಾಡು

ನಿನ್ನ ಮುದ್ದು ಪೆದ್ದು ಮಾತಿಗೆ,
ಕಳೆದು ಹೋದೆ ನಾ ಮೆಲ್ಲಗೆ..
ಜಾರಿತು ಮನಸ್ಸು ನಿನ್ನ ಕಿರುನಗೆಗೆ !!
ಮರೆತೇ ಹೋದೆ ನಾ ನನ್ನನು,
ನಿನ್ನ ಕಣ್ಣ ಮಾಯದ ಮಾತಿಗೆ.
ಕೇಳಿ ನೋಡು ಈ ಹೃದಯದ ಪಾಡು,
ಒಮ್ಮೆ ಬಂದು ಬಳಿಗೆ.

Image may contain: one or more people, ring and close-up

ಮುದ್ದು ಮನಸ್ಸು

ಮನಸ್ಸೇಕೋ ಉಯ್ಯಾಲೆಯಂತೆ ತೂಗುತ್ತಿಹುದು.
ಬೀಳುವೆನೆಂಬ ಭಯದಿ ತವಕಿಸುತ್ತಿಹುದು.
ಯೋಚನೆಗಳು ತೂಗುವ ರಭಸಕ್ಕೆ,
ತಬ್ಬಿಬ್ಬಾಗಿಹುದು ಮುದ್ದು ಮನಸ್ಸು.
ಕಣ್ಮುಚ್ಚಿ ಕುಳಿತೆನು ನಂಬಿಕೆಯ ಹುರುಳನ್ನು ಹಿಡಿದು.
ಕಾಣದಾಯಿತು ದಾರಿ ಕತ್ತಲೆಯು ಆವರಿಸಿ.
ಕೊನೆಗೂ ಜಾರಿ ಬಿದ್ದಿತು ಮನಸ್ಸು,
ನಂಬಿಕೆಯೆಂಬ ಉಯ್ಯಾಲೆಯು ಮುರಿದು.

Image may contain: one or more people, people standing, grass, outdoor and nature

ಪ್ರೀತಿಯ ವಿನಂತಿ

ಬೇಡವೆಂದರು ನೆನಪಾಗುವ ಆ ನಿನ್ನ ಮೊಗ.
ನೆನೆದು ಮುಗುಳ್ನಗುವುದು ಈ ನನ್ನ ಮೊಗ ..
ಕೊನೆ ಬಾರಿ ಕಾಯುತ್ತಿರುವೆನು ನಿನ್ನ ಬರುವಿಕೆಗೀಗ,
ನೀ ಬರುವುದಿಲ್ಲವೆಂದು ಖಚಿತವಾದರೂ ಕೂಡ.
ನಾ ಮಾಡದ ತಪ್ಪಿಗೆ ಶಿಕ್ಷೆ ಏಕೆ ಈಗ ?
ಸಂತಸದ ದಾರಿಯಲ್ಲಿ ನೆನಪಾಗಿ ದಯಮಾಡಿ ಕಾಡಬೇಡ.
ಇದೊಂದೇ ನನ್ನ ಪ್ರೀತಿಯ ವಿನಂತಿ ನಿನಗೀಗ .

Image may contain: one or more people

ಪ್ರೀತಿಯೆಂಬ ಸಮಾಧಿ

ಸೋಲುತ್ತಿರುವೆ ಸದಾ ನೀ ನೀಡಿದ ನೆನಪುಗಳಿಗೆ
ನೆನಪುಗಳನ್ನು ಒಯ್ದುಬಿಡು ಪ್ರೀತಿಯೆಂಬ ಸಮಾಧಿಗೆ.
ಎಂದಿಗೂ ಕಾಡದಿರು ನೆನಪೆಂಬ ಆತ್ಮವಾಗಿ
ನಿದ್ರಿಸಲು ಭಯವಾಗುವುದು ನಿನ್ನ ನೆನಪುಗಳು ಕರಾಳವಾಗಿ
ಬೇಡದ ಒಲವು ಕರಗಿಬಿಡಲಿ ಮಣ್ಣಲ್ಲಿ ಮಣ್ಣಾಗಿ ..

Image may contain: one or more people

ಏಕಾಂಗಿ

ತಿಳಿಯದಾಗಿದೆ ಏನು
ನಿನ್ನ ಮರೆಯುವ ಸಲುವಾಗಿ
ನಿನ್ನ ನೆನಪಲ್ಲಿ ನಾನೀಗ ಏಕಾಂಗಿ.
ಮರೆತಂತಿರುವೆ, ಮಾತೆಲ್ಲ ಮೌನದಲ್ಲಿ ಅಡಗಿ.
ಹಿಂದುರಗದಿರು ಎಂದು ನನ್ನ ಮೌನಕ್ಕೆ ಕರಗಿ ..

Image may contain: one or more people, sky, plant, tree, outdoor, close-up and nature

ಒಂಟಿ ವಿಹಾರಿ

ಸುಂದರ ಅನುಭವಗಳ ನೆನಪಿನಾರಣ್ಯದಲ್ಲಿ
ಅಲೆಯುತ್ತಿವುದು ಮನವು ಜೀವನವೆಂಬ ಚಾರಣದಲ್ಲಿ..
ನಾ ಒಂಟಿ ವಿಹಾರಿ ಈ ಒಲವ ಪಯಣದಲ್ಲಿ.
ನಗುವಿನ ಹಾದಿಯು ಸಾಗುತ್ತಿಹುದು ನೆನಪುಗಳ ನೆರಳಿನಲ್ಲಿ.
ನೋವು ಮರೆಯಾಗಿರುವುದು ಒಂದು ಸುಂದರ ಮುಗುಳ್ನಗೆಯಲ್ಲಿ…😊